ವಿಷ್ಣು ದಿಗಂಬರ್ ಪಲೂಸ್ಕರ್
ಗೋಚರ
ವಿಷ್ಣು ದಿಗಂಬರ್ ಪಲೂಸ್ಕರ್(ಅಗಸ್ಟ್ ೧೮,೧೮೭೨-ಅಗಸ್ಟ್ ೨೧,೧೯೩೧) ಇವರು ಹಿಂದುಸ್ತಾನಿ ಪದ್ಧತಿಯ ಸಂಗೀತಗಾರರು.
ಬಾಲ್ಯ
[ಬದಲಾಯಿಸಿ]ಇವರು ಬ್ರಿಟಿಷ್ ಆಡಳಿತದ ಬೊಂಬೆ ಪ್ರೆಸಿಡೆನ್ಸಿಯಲ್ಲಿದ್ದ ಕುರುಂದವಾಡ್(ಸದ್ಯದ ಕೊಲ್ಹಾಪುರ್ ಜಿಲ್ಲೆ,ಮಹಾರಾಷ್ಟ್ರ ರಾಜ್ಯ) ಎಂಬ ಚಿಕ್ಕ ಪಟ್ಟಣದಲ್ಲಿ ಜನಿಸಿದರು. ಇವರ ತಂದೆ ದಿಗಂಬರ್ ಗೋಪಾಲ್ ಪಲೂಸ್ಕರ್ ಕೀರ್ತನಕಾರರಾಗಿದ್ದರು. ಇವರು ಕುರುಂದವಾಡದ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದರು. ಮೀರಜ್ನ ಮಹಾರಾಜರು ಇವರ ಪ್ರತಿಭೆಯನ್ನು ಗುರುತಿಸಿ ಇವರನ್ನು ಬಾಲಕೃಷ್ಣಬುವಾ ಇಚಲಕರಂಜೀಕರ್ ಬಳಿ ಸಂಗೀತಾಭ್ಯಾಸಕ್ಕಾಗಿ ಕಳುಹಿಸಿದರು, ೧೨ ವರ್ಷಗಳ ಕಾಲ ೧೮೯೬ರವರೆಗೆ ಇವರ ಅಭ್ಯಾಸ ಬುವಾ ಅವರ ಬಳಿ ನಡೆಯಿತು. ಆ ಸಮಯದಲ್ಲಿ ಗುರು-ಶಿಷ್ಯ ವೈಮನಸ್ಯ ತಲೆದೋರಿತು.
೧೯೭೩ರಲ್ಲಿ ಭಾರತ ಸರಕಾರದ ಅಂಚೆ ಮತ್ತು ತಂತಿ ಇಲಾಖೆಯು ಸಂಗೀತದ ಇವರ ಸೇವೆಯನ್ನು ನೆನೆಯಲು ಅಂಚೆಚೀಟಿಯನ್ನು ಬಿಡುಗಡೆ ಮಾಡಿತು.
ಬಾಹ್ಯ ಸಂಪರ್ಕ
[ಬದಲಾಯಿಸಿ]- ಪಲೂಸ್ಕರ್ ಬಗ್ಗೆ ಲೇಖನ Archived 2007-09-26 ವೇಬ್ಯಾಕ್ ಮೆಷಿನ್ ನಲ್ಲಿ.
- ಪಲೂಸ್ಕರ್ ಬಗ್ಗೆ ಮತ್ತೊಂದು ಲೇಖನ
- ಇಂಡಿಯಾ ಟುಡೇ ಲೇಖನ Archived 2006-05-14 ವೇಬ್ಯಾಕ್ ಮೆಷಿನ್ ನಲ್ಲಿ.